Tuesday, June 29, 2010

ಹಾಯಾದ ಈ ಸಂಜೆ

ಹಾಡು: ಹಾಯಾದ ಈ ಸಂಜೆ / haayada e sanje
ಚಿತ್ರ: ವಸಂತ ಗೀತ (೧೯೮೦) / vasanta geeta
ಹಾಡಿದವರು: ಡಾ|| ರಾಜ್ ಕುಮಾರ್ ಮತ್ತು ಎಸ್. ಜಾನಕಿ
ಸಾಹಿತ್ಯ: ಚಿ|| ಉದಯಶಂಕರ್
ಸಂಗೀತ: ಎಮ್. ರಂಗರಾವ್

ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=zxcbbZM69ms


[ಜಾ]: ಹಾಯಾದ ಈ ಸಂಜೆ.. ಅನಂದ ತುಂಬಿರಲೂ... ಬಾಳೇ ಸಂಗೀತ ಸುಧೆಯಾಯ್ತು...
[ರಾ]: ಹಾಯಾದ ಈ ಸಂಜೆ.. ಅನಂದ ತುಂಬಿರಲೂ... ಬಾಳೇ ಸಂಗೀತ ಸುಧೆಯಾಯ್ತು...
[ಜಾ]: ಹಾಯಾದ..
[ರಾ]: ಈ ಸಂಜೆ..

[ಜಾ]: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವೂ...
[ರಾ]: ನಯನವ ತುಂಬುವ ಹರುಷ ಚಲ್ಲಿದ ಈ ನಗುವು...
[ಜಾ]: ಎಂತಹ ಮುದ್ದಾಗಿದೆ...
[ರಾ]: ಏನು ಸೊಗಸಾಗಿದೆ..ಎ...
[ಜಾ]: ಎಂತಹ ಮುದ್ದಾಗಿದೆ...
[ರಾ]: ಏನು ಸೊಗಸಾಗಿದೆ....ಎ
[ಜಾ]: ಮಗುವಿನ ಹರುಷಕೆ, ಇನಿಯನ ಸರಸಕೆ..
[ರಾ]: ಮನಸಿನ ಕುಣಿತಕೆ, ಹೃದಯದ ಮಿಡಿತಕೆ.., ಜುಮ್ ಅಯಿತು...
[ಜಾ]: ಅಹ..ಅಹ..ಅಹಾ...ಅ..

[ಜಾ/ರಾ]: ಹಾಯಾದ ಈ ಸಂಜೆ.. ಅನಂದ ತುಂಬಿರಲೂ... ಬಾಳೇ ಸಂಗೀತ ಸುಧೆಯಾಯ್ತು...
ಹಾಯಾದ.. ಈ ಸಂಜೆ..

[ಜಾ]: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ..
[ರಾ]: ಪ್ರಣಯದ ಗೀತೆಯ ಹಾಡಿ ಬಂದೆ ನಿ ಜೊತೆಯಲ್ಲಿ..
[ಜಾ]: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ..
[ರಾ]: ಪ್ರಣಯದ ಗೀತೆಯ ಹಾಡಿ ಬಂದೆ ನಿ ಜೊತೆಯಲ್ಲಿ.. ಇ...

[ಜಾ]: ಏನು ಸಂತೋಷವೂ..ಉ..
[ರಾ]: ಏನು ಉಲ್ಲಸವೂ..ಉ..

[ಮಗು]: ಏನು ಸಂತೋಷವೋ...

[ರಾ]: ಓ..ಹೋ...

[ಮಗು]: ಏನು ಉಲ್ಲಸವೋ...ಓ...

[ರಾ]: ಯುಗ ಯುಗ ಉರುಳಲಿ ಹೊಸ ಜಗ ಉದಿಸಲಿ..
[ಜಾ]: ಈ ಅನುಬಂಧವು ಹೀಗೆಯೇ ಸಾಗಲಿ.. ಎಂಬಾಸೆಯೂ...
[ರಾ]: ಅಹ.. ಅಹ.. ಅಹಾ....

[ಜಾ/ರಾ]: ಹಾಯಾದ ಈ ಸಂಜೆ.. ಅನಂದ ತುಂಬಿರಲೂ... ಬಾಳೇ ಸಂಗೀತ ಸುಧೆಯಾಯ್ತು...
ಹಾಯಾದ ಈ ಸಂಜೆ.. ಅ... ಆಅ..ಆಅ... ಲ..ಲ..ಲಾ....

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...