Monday, April 26, 2010

ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ

ಚಿತ್ರ: ಹೂವು ಹಣ್ಣು/ವಂಶಿ/Huvu Hannu/Vamshi
ಹಾಡುಃ ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ/taayi taayi laali hado bhumi tayige
ಹಾಡಿರುವರು: ಡಾ॥ ರಾಜ್ ಕುಮಾರ್
ಸಾಹಿತ್ಯ: ಹಂಸಲೇಖ

ಈ ಹಾಡನ್ನ ಇಲ್ಲಿ ನೋಡಿ:  https://www.youtube.com/watch?v=PIjOXXVVKVs


ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ, ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ ।।ತಾಯಿ।।

ಕರುಳ ಕುಡಿಯ ಸುಖ ಕೋರಿ ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು ಅನುಕ್ಷಣಾ ಮಿಡಿವಳು
ಕಾಲಕೂಟವನ್ನು ಸಹಿಸಿ ಕಾಮಕೂಟವನ್ನು ಕ್ಷಮಿಸಿ
ಜಗವನೆ ಮಗುವಿನ ತೆರದಲಿ ತಿಳಿವಳು
ಅಳುವಳು ಅಬಲೆಯು ಎಂದೂ ದುಡಿವಳು
ಮಗುವಿಗೆ ಎಂದೂ ಪ್ರೇಮಮಯಿ ಈ ತಾಯಿ ।।ತಾಯಿ।।

ಗರ್ಭವೇ ತಾಯಿಯ ಸ್ವರ್ಗ ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ ವಹಿಸಿದಾ ತಾಯಿಗೆ ಬ್ರಹ್ಮ

[in ವಂಶಿಃ
ಈ ಮಮತೆಗಾಗಿ ಈ ಮೌನದ ಅಕ್ರಂದನ...
ಅನುಮಾನವಿಲ್ಲ ಇದು ಮಾಯದ ಕಲಿಯುಗ...]

ತೊರೆವಳು ಸುಖ ಸಹವಾಸ ಇರುವಳು ದಿನ ಉಪವಾಸ
ವೇದಮಯಿ ಈ ತಾಯಿ ।।ತಾಯಿ।।

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...